ಸ್ವಚ್ಚತೆಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ

ದಾವಣಗೆರೆ,ಅ. 30 – ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಚತಾ ಕಾರ್ಯಕ್ಕೆ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿದರೆ ಮಾತ್ರ ಸುಂದರ ನಗರ ನಿರ್ಮಾಣವಾಗಲು ಸಾಧ್ಯ ಎಂದು ಮೇಯರ್ ಶೋಭಾ ಪಲ್ಲಾಗಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿಂದು ಮಹಾನಗರ ಪಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚ ಭಾರತ ಕುರಿತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಸಾರ್ವಜನಿಕರ ಸಹಭಾಗಿತ್ವವಿದ್ದಾಗ ಮಾತ್ರ ಸ್ವಚ್ಚ ಹಾಗೂ ಸುಂದರ ನಗರ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಹಕಾರ ನೀಡಿದರೆ ನಮ್ಮ ದಾವಣಗೆರೆಯನ್ನು ಸುಂದರ ನಗರಿಯಾಗಿ ನಿರ್ಮಿಸಬಹುದು. ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಈಗಾಗಲೇ ಅನೇಕ ಉದ್ಯಾನವನಗಳನ್ನು ದತ್ತುಪಡೆದು ಹಸರೀಕರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ನಾಗರೀಕರ ಸಹಕಾರವು ಮುಖ್ಯವಾಗಿದೆ. ಇದರೊಂದಿಗೆ ಯುವ ಸಮೂಹ ಕೈಜೋಡಿಸುವ ಅವಶ್ಯಕತೆ ಇದೆ ಎಂದರು.

ಸ್ವಚ್ಚ ಭಾರತ ಸಂಯೋಜಕರಾದ ಡಾ.ಹೆಚ್.ಎಸ್.ಶಾಂತ ಮಾತನಾಡಿ, ಜ್ಞಾನ ಬಿತ್ತುವ ಮೂಲಕ ಪ್ರತಿಯೊಬ್ಬರ ಮನಸ್ಸು ಪರಿವರ್ತನೆ ಮಾಡಬೇಕು. ಮೊದಲು ಸ್ವಚ್ಚ ನಗರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕಸ-ರಸ ಅಭಿಯಾನ ಈ ಕೆಲಸ ಮಾಡುತ್ತಿದೆ. ಸ್ವಚ್ಚತೆಯ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಬೇಕು. ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ. ನಮ್ಮ ಮನೆಗಳಲ್ಲಿ ನಾವು ಸ್ವಚ್ಚತೆಗೆ ನೀಡುವ ಮಹತ್ವ ಅಪಾರ. ಅದರಂತೆ ನಮ್ಮ ರಸ್ತೆ, ನಮ್ಮ ನಗರ ಎಂಬ ಭಾವನೆಯಿಂದ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಬೇಕು. ಒಣ ಹಾಗೂ ಹಸಿ ಕಸ ವಿಂಗಡಿಸುವ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಪಮೇಯರ್ ಕೆ.ಚಮನ್ ಸಾಬ್, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಆರ್.ಶಕೀಲಾಬಾನು, ಪಾಲಿಕೆ ಸದಸ್ಯ ರಮೇಶ್ ಆರ್ ಶಿವನಹಳ್ಳಿ, ಕೆ.ಪಿ.ರಾಜೀವನ್ ಉಪಸ್ಥಿತರಿದ್ದರು.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *