ಮುಂದುವರೆದ ಆಪರೇಷನ್ ವರಾಹ

ದಾವಣಗೆರೆ; ನಗರದಲ್ಲಿ ಹಂದಿಗಳ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ.ಇಂದು ಬೆಳಗ್ಗೆ ನಗರದ ವಿವಿಧೆಡೆ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಲ್ಲಿನ ಗಾಂಧಿನಗರ, ಬಾಷಾನಗರ, ದುರ್ಗಾಂಬಿಕ ಮೈದಾನ, ಜಾಲಿನಗರ ರಸ್ತೆ, ಯಲ್ಲಮ್ಮನ ದೇವಸ್ಥಾನ, ಆರ್ ಟಿಓ ಕಚೇರಿ ಸೇರಿದಂತೆ ವಿವಿಧೆಡೆ ಹಂದಿಸೆರೆ ಕಾರ್ಯಾಚರಣೆ ನಡೆಸಲಾಗಿದೆ.

ತಮಿಳುನಾಡಿನಿಂದ ಆಗಮಿಸಿರುವ 25 ಮಂದಿ ತಂಡ ಈ ಕಾರ್ಯಾಚರಣೆಯಲ್ಲಿದ್ದರು. ಮಧ್ಯಾಹ್ನದವರೆಗೂ ಸುಮಾರು 125 ಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿಯಲಾಗಿದೆ. ನಾಳೆಯೂ ಕಾರ್ಯಾಚರಣೆ ಮುಂದುವರೆಯಲಿದ್ದು, ಹಂದಿಗಳ ಮಾಲೀಕರು ಎಚ್ಚೆತ್ತುಕೊಳ್ಳಬೇಕೆಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಸುಂಕದ್ ತಿಳಿಸಿದ್ದಾರೆ. ಈ ವೇಳೆ ಪರಿಸರ ಅಭಿಯಂತರಾದ ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ಅಂಜಿನಪ್ಪ, ಸಂತೋಷ್ ಸೇರಿದಂತೆ ಅನೇಕರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *