Home / ಆಹಾರ / ತಿಂಗಳಾದ್ರೂ ಕೊಳೆಯೊದಿಲ್ವಂತೆ ತರಕಾರಿ , ಅದು ಹೇಗೆ ಅಂತಿರಾ ಇಲ್ಲಿದೆ ನೋಡಿ ವಿಜ್ಞಾನಿಗಳ ಸಂಶೋಧನೆ…!!

ತಿಂಗಳಾದ್ರೂ ಕೊಳೆಯೊದಿಲ್ವಂತೆ ತರಕಾರಿ , ಅದು ಹೇಗೆ ಅಂತಿರಾ ಇಲ್ಲಿದೆ ನೋಡಿ ವಿಜ್ಞಾನಿಗಳ ಸಂಶೋಧನೆ…!!

ನೀವು ತರಕಾರಿಯನ್ನ ಒಂದು ವಾರ ತಾಜವಾಗಿ ಇಟ್ಟುಕೊಳ್ಳಬೇಕು ಅಂದ್ರೆ ರೇಫ್ರಿಜಿರೇಟರ್ ಮೊರೆ ಹೋಗ್ತಿರಿ. ಅದನ್ನ ಬಿಟ್ರೆ ತಲೆ ಕೆಳಗೆ ಮಾಡಿದ್ರೂ ತಾಜವಾಗಿ ಇಟ್ಟುಕೊಳ್ಳಲು ಆಗೋದಿಲ್ಲ. ಅದನ್ನ ಮನಗಂಡ ವಿಜ್ಞಾನಿಗಳ ತಂಡವೊಂದು ರೇಫ್ರಿಜಿರೇಟರ್ ಇಲ್ಲದೆ ತರಕಾರಿಗಳನ್ನ ಒಂದು ತಿಂಗಳು ತಾಜವಾಗಿ ಇಟ್ಟುಕೊಳ್ಳುವ ವಿಧಾನ ಕಂಡುಕೊಂಡಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹೈದರಾಬಾದ್ ನ ಸಂಶೋಧಕರು ಇಂತಹದೊಂದು ಹೊಸ ಪ್ರಯತ್ನಕ್ಕೆ ಕೈಹಾಕಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ. ಸಂಶೋಧಕರು ಟೊಮ್ಯಾಟೊಗೆ ವಿಶೇಷ ಸೆಲ್ಯೂಷನ್ ಅಂಟಿಸುವ ಮೂಲಕ 30 ದಿನಗಳ ಕಾಲ ಹಾಳಾಗದೆ ನೋಡಿಕೊಂಡಿದ್ದಾರೆ.

ಐಐಟಿಯ  ಮೇಟಿರಿಯಲ್ಸ್ ಸೈನ್ಸ್ ಮತ್ತು ಮೆಟಲರ್ಜಿಕಲ್ ಇಂಜಿನಿಯರ್ ಡಾ.ಶಿವಕಲ್ಯಾಣಿ ಆದೆಪು ಮತ್ತು ಡಾ.ಮುದ್ರಿಕಾ ಖಂಡಲ್ವಾ ಅವರ ತಂಡ ಇಂತಹ ಸಂಶೋಧನೆ ಮಾಡಿರುವುದು. ಬೆಳ್ಳಿ ನ್ಯಾನೋಪರ್ಟಿಕಲ್ಸ್ ನೊಂದಿಗೆ ಬೆರೆಸಿರುವ ಬ್ಯಾಕ್ಟಿರಿಯಾ ಸೆಲ್ಯೂಷನಿಂದ ಮಾಡಿದ ಪ್ಯಾಕೇಟ್ ನಲ್ಲಿ ತರಕಾರಿ ಇಟ್ಟರೆ ಹಾಳಾಗುವುದಿಲ್ಲ ಅನ್ನೋದು ಸಂಶೋಧಕರ ಮಾತು.

ಹೀಗೆ ಹೊಸ ತಂತ್ರಜ್ಞಾನ ಬಳಸಿ ತರಕಾರಿಗಳನ್ನ ತಾಜವಾಗಿ ಇಡುವುದರಿಂದ ಯಾವುದಾದ್ರೂ ಬ್ಯಾಕ್ಟೀರಿಗಳು ಉತ್ಪತ್ತಿಯಾಗುತ್ತವೆಯಾ, ತಿಂಗಳ ಬಳಿಕ ಬಳಕೆ ಮಾಡೋದ್ರಿಂದ ಮಾನುಕುಲಕ್ಕೆ ಹಾನಿ ಏನಾದ್ರೂ ಇದೆಯಾ ಅನ್ನೋ ಸಂಶೋಧನೆಯೂ ನಡೆಯುತ್ತಿದ್ದು, ಯಾವುದೇ ಸೈಡ್ ಎಫೆಕ್ಟ್ ಇಲ್ಲ ಅಂತ ಗೊತ್ತಾದ ಬಳಿಕ ರೇಫ್ರಿಜಿರೇಟರ್ ಇಲ್ಲದೆ ಒಂದು ತಿಂಗಳು ತರಕಾರಿ ರಕ್ಷಿಸಬಹುದಾ ತಂತ್ರಜ್ಞಾನ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ.

About flashnewskannada

Leave a Reply

Your email address will not be published. Required fields are marked *