ಕಲ್ಲು ಹೃದಯಗಳಲ್ಲಿ ಕಣ್ಣೀರು ಬರಲ್ಲ: ಶಾಸಕ ಸುಧಾಕರ್ ಗೆ ಸಚಿವ ನಾಡಗೌಡ ತಿರುಗೇಟು

ಕೊಪ್ಪಳ, ಫ್ಲಾಶ್ ನ್ಯೂಸ್ ಕನ್ನಡ

ಮಾನವೀಯತೆ ಇದ್ದವರಿಗೆ ಸಹಜವಾಗಿ ಕಣ್ಣೀರು ಬರುತ್ತವೆ. ಕಲ್ಲು ಹೃದಯಗಳಿಗೆ ಕಣ್ಣೀರು ಬರೋದಿಲ್ಲ ಅಂತಾ ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಕಾಂಗ್ರೆಸ್ ಶಾಸಕ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರವಾಗಿ ಗಾಂಗಾವತಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಕಷ್ಟು ಕೆಲಸ ಮಾಡಿದ್ರೂ ಟೀಕೆ ಬಂದಾಗ ಮನೋಸಹಜವಾಗಿ ಕಣ್ಣೀರು ಬರ್ತವೆ. ಇದು ಸಹಜ ಎಂದರು.

ಇನ್ನೂ ಬಿಜೆಪಿ, ಜೆಡಿಎಸ್ ಶಾಸಕರಿಗೆ ಅನುದಾನ ನೀಡಬಾರದು ಎಂಬ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿಕೆಗೂ ತಿರುಗೇಟು ನೀಡಿದ ಅವರು,ಅನ್ಸಾರಿ ಬೇಕಾದ್ದನ್ನು ಹೇಳಬಹುದು. ಎಲ್ಲ ಪಕ್ಷದ ಶಾಸಕರಿಗೂ ಅಗತ್ಯ ಅನುದಾನ ನೀಡುವುದು ಸರಕಾರದ ಜವಾಬ್ದಾರಿಯುತ ಕೆಲಸವಾಗಿದೆ. ಅದನ್ನು ಸರಕಾರ ಮಾಡುತ್ತದೆ ಮತ್ತು ಅನುದಾನ ತರುವ ಧಮ್ ನಮಗೂ ಇದೆ ಅಂತಾ ಹೇಳಿದರು.

ಶೀಘ್ರದಲ್ಲಿ ರಾಯಚೂರಿನಲ್ಲಿ ಪಶು ಸಂಗೋಪನೆ ಇಲಾಖೆ ಡಿವಿಜನಲ್ ಆಫೀಸ್ ಆರಂಭಿಸಲಾಗುವುದು.ಎಲ್ಲ ಭಾಗದಲ್ಲಿ ಪಶು ಆಸ್ಪತ್ರೆ ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಭಾಗದಲ್ಲಿ ಪಶು ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ 150 ಖಾಲಿ ಹುದ್ದೆಗೆ ಅರ್ಜಿ ಕರೆದಿದ್ದು, ಕೇವಲ 60 ವೈದ್ಯರು ದಾಖಲಾತಿ ಪರಿಶೀಲನೆಗೆ ಬಂದಿದ್ದಾರೆ.

ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎರಡು ಬೆಳೆಗೆ ನೀರು ಬಿಡುವ ಬಗ್ಗೆ ಸಭೆಯಲ್ಲಿ ಚಿಂತನೆ ನಡೆಸಲಾಗುವುದು ಎಂದರು. ಸಾಲ ಮನ್ನಾದ ಹೊರೆ ಭರಿಸಲು ತೆರಿಗೆ ಏರಿಕೆ ಅನಿವಾರ್ಯ. ಎಲ್ಲ ಸರ್ಕಾರಗಳು ಇದನ್ನೇ ಮಾಡುತ್ತವೆ. ಹಣ ಪ್ರಿಂಟ್ ಮಾಡಿ ತೋರೊದಕ್ಕೆ ಆಗೋಗಿಲ್ಲವಲ್ಲ ಎಂದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *