ವಿಕಲಚೇತನ ಯುವತಿಗೆ ಬಾಳು ನೀಡಿದ ಪದವೀಧರ!

ಹರಪನಹಳ್ಳಿ; ಆಕೆಗೆ ಎದ್ದು ನಿಲ್ಲಲು ಎರಡು ಕಾಲುಗಳಿಗೆ ಸ್ವಾಧೀನ ಇಲ್ಲ. ಆದರೆ ಬದುಕಿನಲ್ಲಿ ನಿರಾಸೆ ಹೊಂದಿಲ್ಲ. ಎಲ್ಲರಂತೆ ಬದುಕಬೇಕೆಂಬ ಹಂಬಲ ಬೆಟ್ಟದಷ್ಟಿದೆ. ಅವರ ಕನಸುಗಳಿಗೆ, ಆಸೆಗಳಿಗೆ ಆಸರೆಯಾಗಿ ನಿಲ್ಲಲು ಪದವೀಧರ ಯುವಕ ಕೈ ಹಿಡಿದಿದ್ದಾನೆ.


ತಾಲೂಕು ಚಿಕ್ಕಮೇಗಳಗೆರೆ ಗ್ರಾಮದ ದುರುಗಮ್ಮ, ಯಲ್ಲಪ್ಪ ಇವರ ದ್ವಿತಿಯ ಪುತ್ರಿ ವಿಕಲಚೇತನ ಯುವತಿ ಹೆಚ್.ಸುನೀತಾ ಇವರನ್ನ ವಿಜಯಪುರ ಜಿಲ್ಲೆಯ ಸಿಂಧಿಗಿ ತಾಲೂಕಿನ ಜಾಲವಾದ ಗ್ರಾಮದ ಶಾಂತವ್ವ, ತಿಪ್ಪಣ್ಣ ಕಟ್ಟಿಮನಿ ಇವರ ದ್ವಿತೀಯ ಪುತ್ರನಾಗಿರುವ ಬಿ.ಎ, ಡಿ.ಇಡಿ ಪದವೀಧರ ಯುವಕ ಶ್ರವಣಕುಮಾರ ಅವರ ವಿವಾಹ ಶುಕ್ರವಾರ ಚಿಕ್ಕಮೇಗಳಗೆರೆ ಗ್ರಾಮದಲ್ಲಿ ನಡೆಯಿತು.ಶ್ರವಣಕುಮಾರ ಸದ್ಯ ಶಿಕ್ಷಕರ ತರಬೇತಿ ಹೊಂದಿರುತ್ತಾರೆ. ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುನೀತಾ ಕೂಡ ತಾಲೂಕಿನ ಪುಣಭಘಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಗ್ರಾಮೀಣ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ದಾಂಪತ್ಯ ಜೀಔನಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ವಧು ವರರಿಗೆ ಶುಭ ಹಾರೈಸಿ ಮಾತನಾಡಿದ ವಿಕಲಚೇತನರ ತಾಲೂಕು ಅಧಿಕಾರಿ ಆರ್.ಧನರಾಜ್ ಅವರು, ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಸಾಮಾನ್ಯ ಯುವಕ ಅಥವಾ ಯುವತಿ ವಿಕಲಚೇತನರನ್ನು ವಿವಾಹವಾದಲ್ಲಿ 50 ಸಾವಿರರೂಗಳ ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇವರಿಗೆ ಶೀಘ್ರವೇ ಪ್ರೋತ್ಸಾಹ ಧನ ನೀಡಲು ಅಗತ್ಯ ಕ್ರಮವಹಿಸಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಎಂ.ಆರ್.ಡಬ್ಲ್ಯೂ ಡಿ.ನೇಮ್ಯನಾಯ್ಕ ಹಾಗೂ ವಿ.ಆರ್.ಡಬ್ಲ್ಯೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವಿ.ಆರ್.ಡಬ್ಲ್ಯೂ ಹಾಜರಾಗಿ ನವ ದಂಪತಿಗಳಿಗೆ ಶುಭ ಕೋರಿದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *