ವಕ್ಫ್ ಆಸ್ತಿ ಕಬಳಿಸಿದವರನ್ನು ದೇವರು ಕ್ಷಮಿಸುವುದಿಲ್ಲ, ಸಚಿವ ಜಮೀರ್

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ

ವಕ್ಫ್ ಆಸ್ತಿ ದುರುಪಯೋಗ ಮಾಡಿದವರು ಯಾರೂ ಉದ್ಧಾರ ಆಗಿಲ್ಲ. ಅವರನ್ನು ದೇವರು ಸಹ ಕ್ಷಮಿಸಲ್ಲ ಎಂದು ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ. ವಕ್ಫ್ ಆಸ್ತಿ ಒತ್ತುವರಿ ಸಂಬಂಧ ಸಚಿವರು ಯೂ ಟರ್ನ್ ಹೊಡೆದಿದ್ದಾರೆ ಎನ್ನುವ ಬಿಜೆಪಿ ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯೂ ಟರ್ನ್ ಮಾಡುವ ವ್ಯಕ್ತಿಯಲ್ಲ. ಏನಿದ್ದರೂ ನೇರವಾಗಿ ಮಾತನಾಡುವನು ಎಂದಿದ್ದಾರೆ.

ವಕ್ಫ್ ಆಸ್ತಿ ಒತ್ತುವರಿ ಸಂಬಂಧ ಅನ್ವರ್ ಮಾನಿಪ್ಪಾಡಿ ನೀಡಿದ ವರದಿಯಲ್ಲಿ ಸತ್ಯ ಇಲ್ಲ ಎಂದನಿಸುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ವಕ್ಫ್ ಆಸ್ತಿ ಕಬಳಿಕೆ ವರದಿ ನೀಡಲಾಗಿತ್ತು.‌ ಆಗ ಅವರು ಯಾಕೆ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಸದ್ಯ ಪ್ರಕರಣ ನ್ಯಾಯಲಯದಲ್ಲಿದೆ. ಹೀಗಿರುವಾಗ ಸಿಬಿಐ ತನಿಖೆಗೆ ಹೇಗೆ ಕೊಡಲು ಸಾಧ್ಯ? ಸದನದಲ್ಲಿ ಸಿಬಿಐ ತನಿಖೆ‌ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದ್ದೆ.

ನಾವು ಸಿಬಿಐಗೆ ಕೊಡಲು ಸಿದ್ಧರಿದ್ದೇವೆ. ಆದರೆ ನೀವು ಯಾಕೆ ಕೊಟ್ಟಿಲ್ಲ ಎಂದು ಕೇಳಿದ್ದೆ ಅಷ್ಟೇ. ಅದನ್ನು ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ವಕ್ಫ್ ಆಸ್ತಿ ದುರುಪಯೋಗ ಆಗಿದೆ. ಆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ನನಗೆ ಎರಡು ತಿಂಗಳು ಕಾಲಾವಕಾಶ ಕೊಡಿ. ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಸಚಿವ ಜಮೀರ್​ ಖಾನ್​ ತಿಳಿಸಿದರು.

ಸಿಎಂ ಹೆಚ್​ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ನಾನು‌ ನನ್ನ ಇಲಾಖೆ ವಿಚಾರ ಬಿಟ್ಟು ಬೇರೆ ಏನೂ‌ ಮಾತಾಡದಿರಲು ತೀರ್ಮಾನಿಸಿದ್ದೇನೆ. ನಾನು‌ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಲ್ಲ.‌ ಕುಮಾರಸ್ವಾಮಿ ಬಗೆಗಿನ ಈ ಹಿಂದಿನ ನನ್ನ ಹೇಳಿಕೆಗಳು ಯಾವುದೂ ನನಗೆ ನೆನಪಿಲ್ಲ. ಎಲ್ಲವನ್ನೂ ನಾನು ಮರೆತುಬಿಟ್ಟಿದ್ದೇನೆ. ನಾನು ಯಾವುದರ ಬಗ್ಗೆಯೂ ಮಾತನಾಡಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *