ಕೌಶಲ್ಯವಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ

ದಾವಣಗೆರೆ; ಉದ್ಯೋಗಕ್ಕಾಗಿ ಅಂಕಪಟ್ಟಿ, ಪ್ರಮಾಣ ಪತ್ರ ಸಾಧನವಾಗಿದೆ. ಕೌಶಲ್ಯವಿದ್ದರೆ ಮಾತ್ರ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿಂದು ಆಯೋಜಿಸಿದ್ದ ಕೌಶಲ್ಯಾಭಿವೃದ್ದಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,

ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ನಡವಳಿಕೆ ಹಾಗೂ ಮಾತುಗಾರಿಕೆಯ ಕೌಶಲ್ಯ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಮಾತನಾಡುವುದು ಮತ್ತು ಬರೆಯುವ, ಕಲಿಸುವುದು ಕೇವಲ ಕನ್ನಡ ಶಿಕ್ಷಕರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಯಾವುದೇ ಒಂದು ವಸ್ತುವನ್ನು ಕೊಟ್ಟರೆ ಹೊಸತನ ಮತ್ತು ಮೌಲ್ಯ ತುಂಬುವ ನಿಟ್ಟಿನಲ್ಲಿ ಕೌಶಲ್ಯ ಬೆಳೆಸಿಕೊಳ್ಳಬೇಕು. ಜ್ಞಾನದ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಂಡಾಗ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತದೆ. ಅನುಭವದ ಜೊತೆ ಜ್ಞಾನ ಪಡೆದು ಇತರರಿಗೆ ಅದನ್ನು ಪಸರಿಸುವ ಕೆಲಸ ಮಾಡಬೇಕು. ಹಿರಿಯರ ಮಾತುಗಳಲ್ಲಿ ಅನುಭವ, ವಿವೇಕವಿರುತ್ತದೆ. ಅವರಿಂದ ನಾವು ತಿಳಿದುಕೊಂಡು ಜೀವನದಲ್ಲಿ ಅದನ್ನು ಪಾಲನೆ ಮಾಡಬೇಕು. ಸರಳತೆ, ಸಜ್ಜನಿಕೆ, ಮಾತುಗಾರಿಕೆ ವ್ಯಕ್ತಿತ್ವದ ಜೊತೆಗೆ ಇರಬೇಕು. ಶಿಕ್ಷಣ ಉದ್ಯೋಗ ಕಲ್ಪಿಸಿಕೊಡುವಂತಾಗಬೇಕು ಆಗ ನಾವು ಪಡೆದ ವಿದ್ಯಾಭ್ಯಾಸ ಸಾರ್ಥಕವಾಗುತ್ತದೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಕಾಲೇಜುಗಳ ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಹೆಚ್.ಪ್ರೊ.ಮುರುಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ವಿಧಾನ, ಹೊಸತನವನ್ನು ಕಲಿಯಬೇಕು. ಪ್ರಸ್ತುತ ದಿನದಲ್ಲಿ ಶಿಕ್ಷಣ ಜೀವನಮೌಲ್ಯಗಳನ್ನು ಕಲಿಸುವವರಿದ್ದಾರೆ. ಆದರೆ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾಧನೀಯ. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ಪ್ರಸ್ತುತ ದಿನದಲ್ಲಿ ಕಲಿಕೆ ಮತ್ತು ಕಲಿಸುವುದು ವ್ಯಾಪಾರದೃಷ್ಟಿಕೋನದಿಂದ ನೋಡುವಂತಾಗಿದೆ ಇದು ಬದಲಾಗಬೇಕು. ಸಂಸ್ಕೃತಿ ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಜೀವನದ ಮೌಲ್ಯಗಳನ್ನು ಕಲಿಸುವುದಕ್ಕೆ ತಿಂಗಳಿಗೊಮ್ಮೆ ಸೆಮಿನಾರ್ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಾ.ವಿ.ವಾಣಿಜ್ಯ ಮತ್ತು ನಿರ್ವಹಣಾ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಸ್.ಪಿ.ರವಿ, ಮಾ.ಸ.ಬ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಹನುಮಂತಪ್ಪ ಸೇರಿದಂತೆ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *